ಲೇಖಕರು: ಡಾ. ಎನ್. ಜಗದೀಶ್ ಕೊಪ್ಪ
ಪ್ರಕಾಶನ: ಅಮೂಲ್ಯ ಪುಸ್ತಕ
ವಿಜಯನಗರ, ಬೆಂಗಳೂರು
*********************
ಗಾಲಿಬ್‌ನ ಕಾವ್ಯದಲ್ಲಿ ಏನುಂಟು ಏನಿಲ್ಲ? ಸೂಫಿ ಸಂತರ ದಾರ್ಶನಿಕ ಒಳನೋಟವಿದೆ. ತುಂಟ ಪ್ರೇಮಿಯ ಕುಹಕ ನೋಟವಿದೆ. ಪ್ರಾಮಾಣಿಕವಾಗಿ ಪ್ರೀತಿಸಿದ ಪ್ರೇಮಿಯೊಬ್ಬನ ಆರ್ತನಾದವಿದೆ. ಭಗ್ನಪ್ರೇಮಿಯ ಒಡೆದುಹೋದ ಹೃದಯ ಚೂರುಗಳ ಮಿಡಿತದ ಶಬ್ದವಿದೆ. ಕುಡುಕನೊಬ್ಬನ ರೋಮಾಂಚನವಿದೆ. ಸಮಾಜವನ್ನು ಗೇಲಿಮಾಡುವ ವಿದೂಷಕನೊಬ್ಬನ ಹಾಸ್ಯಪ್ರಜ್ಞೆ ಇದೆ. ಇವೆಲ್ಲಕ್ಕಿಂತ ಹೆಚ್ಚಾಗಿ ಗಾಲಿಬ್‌ನ ಕಾವ್ಯದ ಆಳದಲ್ಲಿ ಅಪ್ಪಟ ಮನುಷ್ಯನೊಬ್ಬನ ತಾಜಾತನದ ತುಡಿತಗಳಿವೆ. ಈ ಕಾರಣಕ್ಕಾಗಿ ಗಾಲಿಬ್ ಇಂದಿಗೂ ಭಾರತದ ಎಲ್ಲಾ ಭಾಷೆಗಳ ಕಾವ್ಯ ಪ್ರೇಮಿಗಳ ಪ್ರೀತಿಯ ಕವಿಯಾಗಿದ್ದಾನೆ.
-ಡಾ. ಎನ್. ಜಗದೀಶ್ ಕೊಪ್ಪ