ರಾಶೊಮಾನ್ (ಯೂನೊಸ್ ಕೆ ಅಕ್ ತಗವ ಕಥೆಗಳು)
ರಾಶೊಮಾನ್ (ಯೂನೊಸ್ ಕೆ ಅಕ್ ತಗವ ಕಥೆಗಳು)
ರಾಶೊಮಾನ್ (ಯೂನೊಸ್ ಕೆ ಅಕ್ ತಗವ ಕಥೆಗಳು)
Share:
₹180
₹200
10% off
Ships within 3 days
SKU :
97
Description

ಕನ್ನಡಕ್ಕೆ: ಕೆ. ಪುಟ್ಟಸ್ವಾಮಿ

ಪ್ರಕಾಶನ: ಅಭಿನವ

*********************

ಜಪಾನಿನ ಆಧುನಿಕ ಕಥನ ಸಾಹಿತ್ಯವನ್ನು ಹೊರಳುದಾರಿಗೆ ಎಳೆತಂದ ಯೂನೊಸ್‌ಕೆ ಅಕ್ ತಗವನ ಕಥೆಗಳು ಕಾಲ ಮತ್ತು ದೇಶಾತೀತವಾದ ಮನುಷ್ಯನ ಅಂತರಂಗಕ್ಕೆ ಕನ್ನಡಿ ಹಿಡಿಯುವ, ಸೌಂದರ್ಯ ಮತ್ತು ಭೀಭತ್ಸ ಮಿಲನಗೊಂಡ ವಿಲಕ್ಷಣ ಕಥಾನಕಗಳು. ತನ್ನ ಮನಸ್ಸಿನ ತುಮುಲಗಳನ್ನೆಲ್ಲ ಬಸಿದು ಕತೆಯಾಗಿಸಿದ ಅಕ್ ತಗವ ಸಮಾಜದ ಮೌಲ್ಯಗಳನ್ನು ಪ್ರಶ್ನಿಸುತ್ತಾನೆ. ಮನುಷ್ಯನ ಸಂಕೀರ್ಣ ಮನಸ್ಸಿನ ಭಾವಗಳಿಗೆ ನಾಟಕೀಯ ರೂಪ ನೀಡುತ್ತಾನೆ. ಅಂತರಂಗದ ಪಾತಳಿಗಳಲ್ಲಿರುವ ಅಹಂಕಾರವನ್ನು ಹೊರಗೆಳೆಯುತ್ತಾನೆ. ಮನುಷ್ಯನ ಅಪ್ರಾಮಣಿಕತೆಗೆ ಕನ್ನಡಿ ಹಿಡಿಯುತ್ತಾನೆ. ಚಲತ್ರೆ, ಪುರಾಣ, ಸಮಕಾಲೀನ ಬದುಕು, ಫ್ಯಾಂಟಸಿ ಎಲ್ಲವನ್ನು ಬಳಸಿಕೊಂಡು ಅನೂಹ್ಯವಾದ ಮನುಷ್ಯನ ಅಂತರಂಗವನ್ನು ಶೋಧಿಸಿ ಕತೆಯಾಗಿಸುತ್ತಾನೆ. ಅಹಮಿಕೆ-ಸ್ವಾಭಿಮಾನ, ವಾಸ್ತವ-ಭ್ರಮೆ, ನೀತಿ-ಅನೀತಿಗಳ ನಡುವೆ ಗೆರೆಹೊರೆಯದೆ ವಿಹ್ವಲಗೊಳಿಸುವ ಕಥೆಗಳಿಂದ ಬೆಚ್ಚಿಬೀಳಿಸುತ್ತಾನೆ. ಅಪೂರ್ವವಾದ ವ್ಯಂಗ್ಯ, ರಂಜನೆ, ಸಿಟ್ಟು ಬೆರೆತ ಸಾಮಾಜಿಕ ಟೀಕೆಯ ಅವನ ನಿರೂಪಣಿಗಳು ಜೆನ್ ಕತೆಗಳ ಅಸಂಗತವನ್ನು, ಆಳವಾದ ದರ್ಶನವನ್ನು ಕಟ್ಟುವ ರಚನೆಗಳು.


ಜಗತ್ತಿನ ಸಿನಿಮಾ ನೋಡುಗರು ಬೆಚ್ಚಿ ಎದ್ದುಕೂರುವಂತೆ ಮಾಡಿದ ಅಕಿರ ಕುರೊಸಾವನ ರಾಶೊಮಾನ್ ಚಿತ್ರವು ಅದರ ನಿರ್ದೆಶಕನ ಜೊತೆಯಲ್ಲಿಯೇ ಕತೆಗಾರ ಅಕ್ ತಗವನನ್ನು ಜಗತ್ತಿಗೆ ಪಲಚಯಿಸಿತು, ಈಗಲೂ ಜಗತ್ತಿನ ಸಾಹಿತ್ಯ ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಾಗಿರುವ ಯೂನೊಸ್‌ಕೆ ಅಕ್ ತಗವನ ಕಥೆಗಳು ಕನ್ನಡಕ್ಕೆ ಈ ಪ್ರಮಾಣದಲ್ಲಿ ಪಲಚಯವಾಗುತ್ತಿರುವುದು ಇದೇ ಮೊದಲು.


(ಬೆನ್ನುಡಿಯಿಂದ)

ಅಮೂಲ್ಯ ಪುಸ್ತಕ24 products on store
Payment types
Create your own online store for free.
Sign Up Now