ವಿದ್ಯಾಪತಿಯ ಗೀತೆಗಳು
ವಿದ್ಯಾಪತಿಯ ಗೀತೆಗಳು
ವಿದ್ಯಾಪತಿಯ ಗೀತೆಗಳು
Share:
₹165
₹175
6% off
Ships within 3 days
SKU :
100
Description

ಸಂಪಾದನೆ: ಡಬ್ಲ್ಯು ಜಿ. ಆರ್ಚರ್

ಇಂಗ್ಲಿಷ್ ಅನುವಾದ: ದೇಬೆನ್ ಭಟ್ಟಾಚಾರ್ಯ

ಕನ್ನಡಕ್ಕೆ: ಓ.ಎಲ್. ನಾಗಭೂಷಣ ಸ್ವಾಮಿ

***********************

ಮೈಥಿಲೀ ಭಾಷೆಯ 14ನೇ ಶತಮಾನದ ಮಹಾಕವಿ ವಿದ್ಯಾಪತಿ. ಅವರ ನೂರು ಪ್ರೇಮಕವಿತೆಗಳ ಸಂಕಲನದ ಕನ್ನಡಾನುವಾದವಿದು. ನಿಸರ್ಗದ ಅಂಶಗಳಾದ ಮಿಂಚು, ಮೋಡ, ಚಂದ್ರ, ಇರುಳು, ತಾವರೆ, ದುಂಬಿ, ಮಹಾನ್ ಪ್ರೇಮಿಗಳಾದ ಕೃಷ್ಣ ರಾಧೆಯರೊಡನೆ, ಅವರ ಪ್ರೀತಿ, ವಿರಹ, ಅವೇಗ, ಉದ್ವೇಗ, ದುಃಖ, ಸಂತೋಷಗಳೊಡನೆ ಬೆಸುಗೆ ಮಾಡಿರುವುದೇ ವಿದ್ಯಾಪತಿಯ ವೈಶಿಷ್ಟ್ಯವಾಗಿದೆ. ಜಯದೇವನ ಗೀತಗೋವಿಂದದ ಪ್ರಭಾವ ವಿದ್ಯಾಪತಿಯ ಕವಿತೆಗಳಲ್ಲಿ ಕಾಣಬಹುದಾಗಿದೆ.


ವಿದ್ಯಾಪತಿ ಹುಟ್ಟಿದ್ದು ಚಶಾಪಿ ಎಂಬ ಹಳ್ಳಿಯಲ್ಲಿ. ಇಂದಿನ ಬಿಹಾರದ ಮಧುಬನಿಯಲ್ಲಿದೆ. ಮಿಥಿಲಾ ಪ್ರಾಂತದಲ್ಲಿ ತನ್ನ ಬದುಕಿನ ಬಹುಭಾಗವನ್ನು ಕಳೆದನೆಂದು-ಮಿಥಿಲಾದ ರಾಜ ಕೀರ್ತಿಸಿಂಹನ ಆಶ್ರಯದಲ್ಲಿದ್ದು 'ಕೀರ್ತಿಲತಾ' ಎಂಬ ಕಾವ್ಯ ರಚಿಸಿದನೆಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಭಾರತೀಯ ಸಾಹಿತ್ಯದ ಮಾರ್ಗ ಶೈಲಿಗೆ ಭಿನ್ನವಾಗಿ ಛಂದೋಬದ್ಧ ಕಾವ್ಯಕ್ಕೆ ಹೊರತಾಗಿರುವ ವಿದ್ಯಾಪತಿಯ ಈ ಪ್ರೇಮಗೀತೆಗಳು ಅತ್ಯಂತ ನವೋಲ್ಲಾಸದ ವಿಶಿಷ್ಟ ಕಏತೆಗಳಾಗಿವೆ.

(-ಬೆನ್ನುಡಿಯಿಂದ)

ಅಮೂಲ್ಯ ಪುಸ್ತಕ24 products on store
Payment types
Create your own online store for free.
Sign Up Now